ಮುಸ್ಲಿಮ್ ಮಕ್ಕಳು ತಿಳಿದಿರಲೇಬೇಕಾದ ವಿಷಯಗಳು
ಮುಸ್ಲಿಮ್ ಮಕ್ಕಳು ತಿಳಿದಿರಲೇಬೇಕಾದ ವಿಷಯಗಳು - (ಕನ್ನಡ)
ನವ ಮುಸ್ಲಿಮರಿಗೆ ಸಂಕ್ಷಿಪ್ತ ಉಪಯುಕ್ತ ಮಾರ್ಗದರ್ಶಿ
ಇಸ್ಲಾಮ್ ಧರ್ಮದ ಸಂಕ್ಷಿಪ್ತ ಪರಿಚಯ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಚರ್ಯೆಯಲ್ಲಿರುವಂತೆ
ಇಸ್ಲಾಮಿನ ಸಂದೇಶವಾಹಕ ಮುಹಮ್ಮದ್ صلى الله عليه وسلم
ಇಸ್ಲಾಂ ಎಂದರೇನು? - (ಕನ್ನಡ)
ಈ ಪುಸ್ತಕವು ಇಸ್ಲಾಮಿನ ಕುರಿತಾದ ಕೆಲವು ತಪ್ಪುಕಲ್ಪನೆಗಳನ್ನು ವಿವರಿಸುತ್ತದೆ . ಒಂದು ಜ್ಞಾನಪುರ್ಣ ರೀತಿಯಲ್ಲಿ ಅವುಗಳನ್ನು ಖುರ್\’ಆನ್ ಹಾಗೂ ಸುನ್ನತ್ ನ ಆಧಾರದಲ್ಲಿ ಹೋಗಲಾಡಿಸುವ ಪ್ರಯತ್ನವನ್ನು ಮಾಡುತ್ತದೆ.
ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಗೊಂಡಿರುವ ಏಕದೆವತ್ವ ಹಾಗೂ ಪ್ರವಾದಿತ್ವವನ್ನು ತುಲನಾತ್ಮಕವಾಗಿ ಮುಂದಿಡಲು ಹಾಗೂ ಈ ವಿಷಯದಲ್ಲಿ ಅವುಗಳ ನಿಲುವನ್ನು ಸ್ಪಷ್ಟಗೊಳಿಸಲು ಉಪನ್ಯಾಸಕ ಪ್ರಯತ್ನಿಸಿದ್ದಾರೆ. ಇಸ್ಲಾಂ ಮಾತ್ರವೇ ಸತ್ಯವೆಂಬುದಕ್ಕೆ ಅವರು ಪುರಾವೆಗಳನ್ನು ಸಮರ್ಪಿಸುತ್ತಾರೆ ಹಾಗೂ ಇದರ ಮೂಲಕ ಮಾತ್ರ ವ್ಯಕ್ತಿ ಮತ್ತು ಸಮಾಜ ರಕ್ಷಣೆ ಹೊಂದಲು ಸಾಧ್ಯ.
ಖುರ್‍ಆನ್ ಎಂದರೇನು? - (ಕನ್ನಡ)
ಈ ಕಿರುಪತ್ರದಲ್ಲಿ ಲೇಖಕರು ಖುರ್ಆಿನ್ ಅದ್ಭುತಗಳ ಅದ್ಭುತ ಎಂಬುದಾಗಿ ವಿವರಿಸಿದ್ದಾರೆ. ಜೊತೆಗೆ ಖುರ್ಆ ನ್ನ�ಲ್ಲಿರುವ ಕೆಲವು ವೈಜ್ಞಾನಿಕ ಶಾಖೆಗಳನ್ನು ವಿವರಿಸಿದ್ದಾರೆ.
ಅಲ್ಲಾಹನು ಎಲ್ಲಿದ್ದಾನೆ? - (ಕನ್ನಡ)
ಅಲ್ಲಾಹು ಎಲ್ಲಿದ್ದಾನೆ ಎಂಬ ಪ್ರಶ್ನೆಗೆ ಉತ್ತರ ನೀಡುತ್ತದೆ. ಅದೆಷ್ಟೋ ಜನರು ಈ ವಿಷಯದಲ್ಲಿ ಪರಸ್ಪರ ಚರ್ಚಿಸುವುದನ್ನು ನಾವು ಕಾಣುತ್ತೇವೆ. ಕೆಲವರು ಅಲ್ಲಾಹು ಎಲ್ಲ ಕಡೆಯಿದ್ದಾನೆ ಎನ್ನುತ್ತಾರೆ. ಈ ವಿಷಯದಲ್ಲಿ ಜನರನ್ನು ಸಂಶಯ, ಗೊಂದಲ ಹಾಗು ಪಥಭ್ರಷ್ಟತೆಯಲ್ಲಿ ಬೀಳದಂತೆ ತಡೆಯುವ ಪರಿಣಾಮಕಾರಿಯೂ ಸಂಕ್ಷಿಪ್ತವೂ ಆದ ಉತ್ತರವೂ ಇಗೋ ಇಲ್ಲಿದೆ. ಇದು ಅಲ್ಲಾಹುವಿನ ಗ್ರಂಥ ಹಾಗೂ ಅವನ ಪ್ರವಾದಿಯ ಸುನ್ನತ್ ಪ್ರಕಾರ ಹಾಗೂ ಸಜ್ಜನ ಪೂರ್ವಿಕರ ಮಾರ್ಗದ ಆಧಾರದಲ್ಲಿ ರಚಿಸಲಾದ ಲೇಖನವಾಗಿದೆ.
ಪ್ರತಿಯೊಬ್ಬ ಸತ್ಯವಿಶಾಸಿಯೂ ಐದು ಹೊತ್ತಿನ ನಮಾಝ್ ಅನ್ನು ಸೂಕ್ತ ಸಮಯದಲ್ಲಿ ನಿರ್ವಹಿಸಬೇಕಾದುದು ಅವನ ಮೇಲಿರುವ ಕಡ್ಡಾಯ ಭಾದ್ಯತೆಯಾಗಿದೆ. ಅವುಗಳಲ್ಲೊಂದಾದ ಫ಼ಜ್ರ್ ನಮಾಝಿನ ಪ್ರಾಮುಖ್ಯತೆಯ ಮತ್ತು ಶ್ರೇಷ್ಟತೆಯ ಕುರಿತು ವಿವರಿಸುವ ಲೇಖನವಾಗಿದೆ.
ಅಲ್ಲಾಹು - (ಕನ್ನಡ)
ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.
ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? - (ಕನ್ನಡ)
ಈ ಲೇಖನವು ಮನುಷ್ಯ ಜೀವದ ಪ್ರಾಮುಖ್ಯತೆ, ಇಸ್ಲಾಮಿನ ಯುದ್ಧ ನೀತಿ, ಜಿಹಾದಿನ ಬಗ್ಗೆಯಿರುವ ತಪ್ಪುಕಲ್ಪನೆಗಳು, ಸಹಿಷ್ಣುತೆಯ ಇಸ್ಲಾಮೀ ಚರಿತ್ರೆ, ಇಸ್ಲಾಮಿನಲ್ಲಿರುವ ವಿಶ್ವಭಾತ್ರತ್ವ ಮೊದಲಾದವುಗಳ ಬಗ್ಗೆ ವಿವರಿಸುತ್ತಾ ಮತ್ತು ಒಬ್ಬ ನಿರಪರಾಧಿಯನ್ನು ಅನ್ಯಾಯವಾಗಿ ಕೊಲ್ಲುವುದು ಸಂಪೂರ್ಣ ಮನುಕುಲವನ್ನು ಕೊಲ್ಲುವುದಕ್ಕೆ ಸಮಾನವಾಗಿದೆಯೆಂಬ ಇಸ್ಲಾಮೀ ತತ್ವವನ್ನು ಎತ್ತಿ ತೋರಿಸುತ್ತಾ ಇಸ್ಲಾಮಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲವೆಂದು ಆಧಾರ ಸಹಿತ ವಿವರಿಸುತ್ತದೆ.
ಶಿರ್ಕ್ ಮತ್ತು ಅದರ ವಿಧಗಳು - (ಕನ್ನಡ)
ಈ ಲೇಖನವು ಶಿರ್ಕ್ ನ ಅರ್ಥ ಮತ್ತು ಅದರ ವಿಧಗಳನ್ನು ವಿವರಿಸುತ್ತದೆ. ಹಾಗೆಯೇ ಮುಸ್ಲಿಮ್ ಸಮಾಜದಲ್ಲಿ ವ್ಯಾಪಕವಾಗಿ ಕಂಡು ಬರುವ ಕೆಲವು ಶಿರ್ಕ್ ಗಳನ್ನು ವಿವರಿಸುತ್ತದೆ.

API



