×
Image

ಫ಼ಜ್ರ್ ನಮಾಝ್ ಪ್ರಾಮುಖ್ಯತೆ ಮತ್ತು ಶ್ರೇಷ್ಟತೆಗಳು - (ಕನ್ನಡ)

ಪ್ರತಿಯೊಬ್ಬ ಸತ್ಯವಿಶಾಸಿಯೂ ಐದು ಹೊತ್ತಿನ ನಮಾಝ್ ಅನ್ನು ಸೂಕ್ತ ಸಮಯದಲ್ಲಿ ನಿರ್ವಹಿಸಬೇಕಾದುದು ಅವನ ಮೇಲಿರುವ ಕಡ್ಡಾಯ ಭಾದ್ಯತೆಯಾಗಿದೆ. ಅವುಗಳಲ್ಲೊಂದಾದ ಫ಼ಜ್ರ್ ನಮಾಝಿನ ಪ್ರಾಮುಖ್ಯತೆಯ ಮತ್ತು ಶ್ರೇಷ್ಟತೆಯ ಕುರಿತು ವಿವರಿಸುವ ಲೇಖನವಾಗಿದೆ.

Image

ಶಫಾಅತ್ ಮತ್ತು ಕರಾಮತ್ - (ಕನ್ನಡ)

ಶಫಾಅತ್ ಸಿಗಲು ನಾವು ಯಾರ ಹತ್ತಿರ ಬೇಡಬೇಕು ? ಮುಅಜಿಝತ್ ಅಲ್ಲಾಹನು ಅವನ ಪ್ರವಾದಿಗಳಿಗೆ ಬೆಂಬಲ ನೀಡಲಿಕ್ಕಾಗಿ ಪ್ರಕಟವಾಗುವ ಅದ್ಭುತ ಕಾರ್ಯಗಳಾಗಿವೆ. ಆದರೆ ಪುಣ್ಯವಂತರಾದ ಮಹಾನ್ ವ್ಯಕ್ತಿಗಳಿಗೆ ಆದರದ ರೂಪದಲ್ಲಿ ಅಲ್ಲಾಹು ನೀಡುವಾಗ ಅದು ಕರಾಮತ್ ಎಂದು ಕರೆಯಲಾಗುತ್ತದೆ. ಕರಾಮತ್ ಎಂಬುದು ಅದು ಯಾರಿಗೆ ಪ್ರಕಟವಾಯಿತೋ ಅವರು ರಹಸ್ಯವಾಗಿಡಬೇಕಾದ ಸಂಗತಿಯಾಗಿದೆ. ಸಹಾಬಿಗಳಿಗೆ ಕರಾಮತ್ ನೀಡಿದ್ದರೂ ಕೂಡಾ ಅದು ನಮಗೆ ಅವರೊಂದಿಗೆ ಪ್ರಾರ್ಥಿಸುವುದಕ್ಕೆ ಪುರಾವೆಯಲ್ಲ . ಅಲ್ಲಾಹನು ಎಲ್ಲಿದ್ದಾನೆ ? ಮುಂತಾದ....

Image

ಪ್ರವಾದಿ ಜನ್ಮದಿನಾಚರಣೆ ಇಸ್ಲಾಮಿಕವೇ - (ಕನ್ನಡ)

ಖುರ್’ಆನ್ ಹಾಗೂ ಅಧಿಕೃತ ಸುನ್ನತ್ ಮತ್ತು ಪ್ರಮುಖ ವಿದ್ವಾಂಸರ ಹೇಳಿಕೆಯ ಆಧಾರದಲ್ಲ್ಲಿ ಮೀಲಾದುನ್ನಬಿ ಆಚರಣೆಯ ವಿಧಿಯನ್ನು ಪ್ರಸ್ತುತ ಲೇಖನದಲ್ಲಿ ವಿವರಿಸಲಾಗಿದೆ. ಇದು ಅನುಮತಿಯುಳ್ಳ ಕಾರ್ಯವಾಗಿದೆ ಎಂದು ಹೇಳುವವರ ದುರ್ವಾದ ಹಾಗೂ ಊಹೆಗಳನ್ನೂ ಸಂಕ್ಷಿಪ್ತವಾಗಿ ಖಂಡಿಸಲಾಗಿದೆ . ಇಮಾಂ ಮಾಲಿಕ್ (ರ) ಹೇಳಿದ್ದಾರೆ: ಯಾರಾದರೂ ಇಸ್ಲಾಮಿನಲ್ಲಿ ಹೊಸತಾದ ಕಾರ್ಯವೊಂದನ್ನು ಉತ್ತಮವೆಂದು ಭಾವಿಸಿ ಉಂಟುಮಾಡುತ್ತಾನೋ ಅವನು ಪ್ರವಾದಿ ಮುಹಮ್ಮದ(ಸ)ರು ತಮ್ಮ ಸಂದೆಶವಾಹಕತ್ವದಲ್ಲಿ ವಂಚನೆಯೆಸಗಿದ್ದಾರೆ ಎಂದು ವಾದಿಸಿದವನಾಗಿದ್ದಾನೆ. ಕಾರಣವೇನೆಂದರೆ ಅಲ್ಲಾಹು ಹೇಳಿದ್ದಾನೆ: "ಇಂದಿನ ದಿನ....

Image

ರಮದಾನಿನ ನಂತರವೇನು ? - (ಕನ್ನಡ)

ರಮಾದಾನ್ ತಿಂಗಳಲ್ಲಿ ವೃತಾನುಷ್ಟಾನ ಮತ್ತು ಸತ್ಕರ್ಮ ಗಳಿಂದ ತುಂಬಿದ ಜೀವನ ನಡೆಸಿ ಅಲ್ಲಾಹನ ಮತ್ತು ಪ್ರವಾದಿ ಸಲ್ಲಲ್ಲಾಹು ಅಲೈಹಿ ವಸಲ್ಲಂ ಅವರ ನಿರ್ದೇಶಗಳನ್ನು ಜೀವನದಲ್ಲಿ ಅಳವಡಿಸಿದ ಸತ್ಯ ವಿಶ್ವಾಸಿಗಳು ರಮದಾನಿನ ನಂತರ ಬರುವ ರಮಾದಾನ್ ವರೆಗೂ ಅದೇ ರೀತಿಯ ಜೀವನವನ್ನು ನಡೆಸ ಬೇಕಾಗಿದೆ. ಪಾರತ್ರಿಕ ಜೀವನದಲ್ಲಿ ಅಲ್ಲಾಹ ನು ಮನುಷ್ಯನಲ್ಲಿ ಕೇಳುವ ಐದು ಪ್ರಶ್ನೆಗಳು, ನಾಲಗೆಯ ವಿಪತ್ತುಗಳು, ದ್ವಿಮುಖ ಧೋರಣೆಯ ಕುರಿತು ಪ್ರವಾದಿ ಯು ಹೇಳಿದ ಮಾತುಗಳು, ಮುಂತಾಗಿ ಒಬ್ಬ....

Image

ಅಲ್ಲಾಹು ಅನುಗ್ರಹಿಸಿದವರ ಮಾರ್ಗ - (ಕನ್ನಡ)

ಅಲ್ಲಾಹನಿಂದ ಲಭಿಸಿದ ಅನುಗ್ರಹಗಳಿಗೆ ಮನುಷ್ಯನು ಕೃತಜ್ಞತೆ ಸಲ್ಲಿಸಬೇಕು. ಅಲ್ಲಾಹನ ಕೋಪಕ್ಕೆ ಪಾತ್ರರಾದವರು ಮತ್ತು ದಾರಿ ತಪ್ಪಿದವರ ಮಾರ್ಗ ಯಾವುದು? ಅವನು ಅನುಗ್ರಹಿಸಿದವರು ಯಾರು? ನಾವು ಯಾರನ್ನು ಅನುಸರಿಸಿ ಶಾಶ್ವತ ಮೋಕ್ಷವನ್ನು ಪಡೆಯ ಬೇಕು? ಪ್ರಾರ್ಥನೆ ಮತ್ತು ಆರಾಧನೆಗಳನ್ನೂ ನಾವು ಅಲ್ಲಾಹನೊಡನೆ ಮಾತ್ರ ಮಾಡ ಬೇಕಾಗಿರುವದು ಏಕೆ? ಮುಂತಾದ ಹಲವಾರು ಉಪದೇಶಗಳ ಭಾಷಣ

Image

ನಾಲಗೆಯ ವಿಪತ್ತುಗಳು - (ಕನ್ನಡ)

ಅಲ್ಲಾಹುವಿನ ಅನುಗ್ರಹವಾದ ನಾಲಗೆಯನ್ನು ಮಾನವನು ತನ್ನ ನಾಶಕ್ಕೆ ಬಳಸದೆ ಅದನ್ನು ಅವನ ಸುರಕ್ಷಿತತೆಗೆ ಹೇಗೆ ಬಳಸಬೇಕು ಎಂಬುದನ್ನು ವಿವರಿಸುವ ಲಘು ಕೃತಿ. ಸುಳ್ಳು, ಚಾಡಿ, ಪರನಿಂದೆ ಮುಂತಾದ ದುರ್ಗುಣಗಳಿಂದ ಸತ್ಯವಿಶ್ವಾಸಿಗಳು ದೂರ ನಿಲ್ಲಬೇಕಾದ ಅನಿವಾರ್ಯತೆಯನ್ನು ಇದು ತೋರಿಸಿಕೊಡುತ್ತದೆ.

Image

ಹಜ್ಜ್ ನ ವಿಧಿ ವಿಧಾನಗಳು - (ಕನ್ನಡ)

ಸಂಕ್ಷಿಪ್ತ ರೂಪದಲ್ಲಿ ಹಜ್ಜ್ ನ ವಿಧಿ ವಿಧಾನಗಳನ್ನು ಸಚಿತ್ರ ವಿವರಿಸುವ ಕೃತಿ

Image

ಮಗು ಜನಿಸಿದರೆ - (ಕನ್ನಡ)

ಈ ಲೇಖನವು ಅದಾನ್’ ಮತ್ತು ಇಕಾಮತ್, ಹೆಸರಿಡುವುದು ಮುಂತಾದ ಮಗುಜನಿಸಿದರೆ ಪಾಲಿಸಬೇಕಾದ ವಿಧಿಗಳ ಕುರಿತು ಹಾಗೂ ಪೋಷಕರು ಗಮನಿಸಬೇಕಾದ ಕೆಲವು ವಿಷಯಗಳನ್ನು ಕುರಿತು ವಿವರಿಸುತ್ತದೆ.

Image

ಸ್ವದಖ: ಮಹತ್ವ ಮತ್ತು ಶ್ರೇಷ್ಟತೆ - (ಕನ್ನಡ)

ಅಲ್ಲಾಹನ ಅನುಗ್ರಹವಾದ ಸಂಪತ್ತನ್ನು ಅವನು ಇಚ್ಚಿಸುವವರಿಗೆ ಅಗಣಿತವಾಗಿ ನೀಡುವನು. ಸಂಪತ್ತನ್ನು ಅಲ್ಲಾಹನ ನಿಯಮಗಳಿಗೆ ವಿಧೇಯರಾಗಿದ್ದುಕೊಂಡು ಸಂಪಾದಿಸಬೇಕು ಮತ್ತು ಖರ್ಚು ಮಾಡಬೇಕು. ಸ್ವದಖ:ಗಳ ಮಹತ್ವ, ಶ್ರೇಷ್ಟತೆ ಮತ್ತು ದಾನ ಮಾಡುವವರಿಗೆ ಲಭಿಸುವ ಅತ್ಯಂತ ಪ್ರತಿಫಲಗಳ ಕುರಿತು ವಿವರಿಸುತ್ತದೆ.