×
Image

ಹಜ್ಜ್ ಮತ್ತು ಉಮ್ರಃದ ವಿವರಣೆ - (ಕನ್ನಡ)

ಹಜ್ಜ್ ಮತ್ತು ಉಮ್ರಃಗಳ ಶ್ರೇಷ್ಠತೆಗಳು, ಸ್ಥಂಭಗಳು, ಕಡ್ಡಾಯಗಳು, ಅವುಗಳನ್ನು ನಿರ್ವಹಿಸಬೇಕಾದ ವಿಧಾನ ಮತ್ತು ಹಜ್ಜ್ ಹಾಗೂ ಉಮ್ರಃ ನಿರ್ವಹಿಸುವವರು ಮತ್ತು ಪ್ರವಾದಿ(ಸ)ರವರ ಮಸೀದಿ ಸಂದರ್ಶನ ಮಾಡುವವರು ಪಾಲಿಸಬೇಕಾದ ಮರ್ಯಾದೆಗಳನ್ನು ಈ ಪುಸ್ತಕವು ವಿವರಿಸುತ್ತದೆ.

Image

ಶಅಬಾನ್ ತಿಂಗಳ ಬಗ್ಗೆ ಒಂದು ಮಾತು - (ಕನ್ನಡ)

ಇದು ಶೈಖ್ ರವರ ಪ್ರಬಂಧಗಳ ಸಂಗ್ರಹದಿಂದ ಆಯ್ದುಕೊಳ್ಳಲಾದ ಒಂದು ಪ್ರಬಂಧ. ಇದರಲ್ಲಿ ಶೈಖ್ ರವರು ಶಅಬಾನ್ ತಿಂಗಳ ಮಹತ್ವಗಳನ್ನು ಮತ್ತು ಶಅಬಾನ್ ತಿಂಗಳ ಹದಿನೈದನೇ ದಿನವನ್ನು ಆಚರಿಸುವುದರ ವಿಧಿಯನ್ನು ವಿವರಿಸಿದ್ದಾರೆ.

Image

ಹಜ್ಜ್ ಮತ್ತು ಉಮ್ರಾದ ವಿವರಣೆ - (ಕನ್ನಡ)

ಈ ಕೃತಿಯು ಹಜ್ಜ್ ಮತ್ತು ಉಮ್ರಾವನ್ನು ಮತ್ತು ಹಜ್ಜ್ ನ ವಿಧಗಳನ್ನು ಕುರ್ ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ವಿವರಿಸುತ್ತದೆ.

Image

ಅಲ್ಲಾಹನ ತಿಂಗಳಾದ ಮುಹರ್ರಮ್ನ ಬಗ್ಗೆಯಿರುವ ಹದೀಸ್ಗಳು - (ಕನ್ನಡ)

ಈ ಕಿರುಕೃತಿಯು ಮುಹರ್ರಮ್ ತಿಂಗಳ ಬಗ್ಗೆಯಿರುವ ಹದೀಸ್ ಗಳನ್ನು ಮತ್ತು ಅವುಗಳ ವಿವರಣೆಯನ್ನು ಒಳಗೊಂಡಿದೆ

Image

ಮಕ್ಕಾ ಹರಮ್ ಮತ್ತು ಅದರಲ್ಲಿರುವ ದುಪ್ಪಟ್ಟು ಪ್ರತಿಫಲಗಳು - (ಕನ್ನಡ)

ಈ ಲೇಖನವು ಮಕ್ಕಾ ಹರಮ್ ನ ಶ್ರೇಷ್ಠತೆಗಳನ್ನು ಮತ್ತು ಅದರಲ್ಲಿರುವ ದುಪ್ಪಟ್ಟು ಪ್ರತಿಫಲಗಳನ್ನು ವಿವರಿಸುತ್ತದೆ.

Image

ಕಿಯಾಮು ರಮದಾನ್ ಮತ್ತು ಇಅತಿಕಾಫ್ - (ಕನ್ನಡ)

ಕಿಯಾಮು ರಮದಾನ್ ನ ಶ್ರೇಷ್ಠತೆಗಳು, ಅದನ್ನು ನಿರ್ವಹಿಸಬೇಕಾದ ವಿಧಾನ, ಅದನ್ನು ಜಮಾಅತ್ ಆಗಿ ನಿರ್ವಹಿಸುವುದನ್ನು ಶರೀಅತ್ ಅದೇಶಿಸಿದೆ ಮತ್ತು ಇಅತಿಕಾಫ್ ನ ವಿಷಯದಲ್ಲಿರುವ ಅಮೂಲ್ಯ ಸಂಶೋಧನೆಯನ್ನು ಈ ಕೃತಿಯು ಒಳಗೊಂಡಿದೆ.

Image

ವಿಸ್ಮಯಗೊಳಿಸುವ ಕುರ್ ಆನ್ - (ಕನ್ನಡ)

ಡಾ| ಗ್ಯಾರಿ ಮಿಲ್ಲರ್ ಒಬ್ಬ ತಿಯೋಲಜಿಸ್ಟ್ (ದೇವಾಧ್ಯಯನ ಮಾಡುವವನು) ಮತ್ತು ಗಣಿತ ಶಾಸ್ತ್ರಜ್ಞರಾಗಿದ್ದರು. ಕುರ್ ಆನಿನಲ್ಲಿ ಒಂದು ತಪ್ಪನ್ನಾದರೂ ಹುಡುಕಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಇವರು ಕುರ್ ಆನ್ ಅಧ್ಯಯನ ಮಾಡಲು ಆರಂಭಿಸಿದರು. ಆದರೆ ಕುರ್ ಆನಿನ ಅಧ್ಯಯನ ಮಾಡತೊಡಗಿದಂತೆ ಅವರಿಗೆ ಅದು ವಿಸ್ಮಯಕರವಾಗಿ ಕಂಡಿತು. ತರುವಾಯ ಅವರು ಇಸ್ಲಾಮನ್ನು ಸ್ವೀಕರಿಸಿ ಮುಸ್ಲಿಮರಾದರು. ಕುರ್ ಆನನ್ನು ಒಂದು ವೈಜ್ಞಾನಿಕ ದೃಷ್ಟಿಕೋನದಿಂದ ಸಮೀಪಿಸಿದ ತನ್ನ ಅನುಭವಗಳನ್ನು ಅವರು ಇದರಲ್ಲಿ ವಿವರಿಸಿದ್ದಾರೆ.

Image

ಫೋನ್ ಸಂಭಾಷಣೆಯ ಶಿಷ್ಟಾಚಾರಗಳು - (ಕನ್ನಡ)

ಫೋನ್ ಮತ್ತು ಮೊಬೈಲ್ ಬಳಕೆಯು ಇಂದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ ಫೋನಿನಲ್ಲಿ ಸಂಭಾಷಣೆ ಮಾಡುವಾಗ ನಾವು ಪಾಲಿಸಬೇಕಾದ ಕೆಲವು ಶಿಷ್ಟಾಚಾರಗಳನ್ನು ಈ ಕೃತಿಯು ವಿವರಿಸುತ್ತದೆ. ಫೋನಿನ ಸದುಪಯೋಗವಾಗುವುದಕ್ಕಾಗಿ ಮತ್ತು ಫೋನಿನಿಂದಾಗಿ ಅಲ್ಲಾಹನ ಕ್ರೋಧಕ್ಕೆ ಒಳಗಾಗದಿರುವುದಕ್ಕಾಗಿ ಈ ಶಿಷ್ಟಾಚಾರಗಳನ್ನು ನಾವು ಪಾಲಿಸಬೇಕಾಗಿದೆ.

Image

ಇಸ್ತಿಗ್ಫಾರ್ ಮಾಡುವ ಅತಿಶ್ರೇಷ್ಠ ವಿಧಾನ - (ಕನ್ನಡ)

ಇಸ್ತಿಗ್ಫಾರ್ ಮಾಡುವ ಅತಿಶ್ರೇಷ್ಠ ವಿಧಾನವನ್ನು ವಿವರಿಸುವ ಹದೀಸಿನ ವ್ಯಾಖ್ಯಾನ ಮತ್ತು ಇಸ್ತಿಗ್ಫಾರ್’ನ ಶ್ರೇಷ್ಠತೆಗಳನ್ನು ಈ ಪುಸ್ತಕವು ಒಳಗೊಂಡಿದೆ.

Image

ಜೀವನ ಮಾಧುರ್ಯ - (ಕನ್ನಡ)

ನಿಸ್ಸಂಶಯವಾಗಿಯೂ ಜೀವನದಲ್ಲಿ ಸೌಭಾಗ್ಯವನ್ನು ಅಥವಾ ಜೀವನ ಮಾಧುರ್ಯವನ್ನು ಅರಸುವುದು ಮಾನವನು ಬಯಸುವಂಥಹ ಜೀವನ ಲಕ್ಷ್ಯವಾಗಿದೆ. ಅವನು ತನ್ನ ದೈನಂದಿನ ಚಟುವಟಿಕೆಗಳ ಮೂಲಕ ಜೀವನ ಮಾಧುರ್ಯ, ಶಾಂತತೆ ಹಾಗೂ ನೆಮ್ಮದಿಯನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ವಸ್ತುತ ಜೀವನ ಸೌಭಾಗ್ಯ ದ ಕುರಿತಾದ ಜನರ ನಿಲುವುಗಳು ಒಂದೇ ತೆರನಾದವುಗಳಲ್ಲ. ಹೆಚ್ಚಿನ ಜನರು ಅದನ್ನು ಪಡೆಯುವುದರಲ್ಲಿ ಅವುಗಳ ಮಾರ್ಗಗಳಿಗೆ ತಲುಪುವುದರಲ್ಲಿ ಎಡವುತ್ತಾರೆ ಹಾಗೂ ಅವುಗಳ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ. ನಿಜವಾಗಿ ಹೇಳುವುದಾದರೆ ಅವುಗಳನ್ನು ಪಡೆಯಲು ಹಾಗೂ....

Image

200 ಕಿರು ಹದೀಸ್ ಗಳು - (ಕನ್ನಡ)

ಈ ಪುಸ್ತಕವು ಸಹೀಹ್ ಅಲ್ ಬುಖಾರಿ ಮತ್ತು ಸಹೀಹ್ ಮುಸ್ಲಿಮ್ ನಲ್ಲಿರುವ 200 ಹದೀಸ್ ಗಳನ್ನು ಕನ್ನಡ ಅನುವಾದದೊಂದಿಗೆ ಒಳಗೊಂಡಿದೆ.