×
Image

ವಿಧಿಯನ್ನು ಹಳಿಯ ಬೇಡಿ - (ಕನ್ನಡ)

ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.

Image

ಪ್ರವಾದಿಚರ್ಯೆಯ ಬಗ್ಗೆ ಅಕ್ಲಾನಿಗಳ ನಿಲುವು - (ಕನ್ನಡ)

ಪ್ರವಾದಿ ಮುಹಮ್ಮದ್(ಸ)ರವರ ಸುನ್ನತ್ತಿನ ಬಗ್ಗೆ ಅಕ್ಲಾನಿಗಳ ನಿಲುವನ್ನು ಈ ಲೇಖನವು ಬಹಿರಂಗಪಡಿಸುತ್ತದೆ.

Image

ಶಅಬಾನ್ ತಿಂಗಳ ಬಗ್ಗೆ ಒಂದು ಮಾತು - (ಕನ್ನಡ)

ಇದು ಶೈಖ್ ರವರ ಪ್ರಬಂಧಗಳ ಸಂಗ್ರಹದಿಂದ ಆಯ್ದುಕೊಳ್ಳಲಾದ ಒಂದು ಪ್ರಬಂಧ. ಇದರಲ್ಲಿ ಶೈಖ್ ರವರು ಶಅಬಾನ್ ತಿಂಗಳ ಮಹತ್ವಗಳನ್ನು ಮತ್ತು ಶಅಬಾನ್ ತಿಂಗಳ ಹದಿನೈದನೇ ದಿನವನ್ನು ಆಚರಿಸುವುದರ ವಿಧಿಯನ್ನು ವಿವರಿಸಿದ್ದಾರೆ.

Image

ಪ್ರವಾದಿ(ಸ)ರಿಗೆ ಸಿಹ್ರ್ ಮಾಡಲಾಗಿತ್ತೇ? - (ಕನ್ನಡ)

ಪ್ರವಾದಿ(ಸ)ರಿಗೆ ಸಿಹ್ರ್ ಮಾಡಲಾದ ಘಟನೆಯ ಬಗ್ಗೆ ಉಲಮಾಗಳಿಗಿರುವ ಭಿನ್ನಾಭಿಪ್ರಾಯಗಳು ಮತ್ತು ಪ್ರವಾದಿ(ಸ)ರಿಗೆ ಸಿಹ್ರ್ ಬಾಧಿಸಿಲ್ಲ, ಅದು ಕಟ್ಟುಕಥೆಯಾಗಿದೆಯೆಂದು ಹೇಳುವವರಿಗಿರುವ ಉತ್ತರವನ್ನು ಈ ಲೇಖನವು ಒಳಗೊಂಡಿದೆ.

Image

ಸಲಫಿಯ್ಯತ್ ಎಂದರೇನು? - (ಕನ್ನಡ)

ಸಲಫಿಯ್ಯತ್ ಎಂದರೇನು? ಸಲಫಿಯ್ಯತ್ ಎಂಬುದು ಒಂದು ವಿಶೇಷ ಪಂಗಡವೇ? ಗುಂಪುಗಾರಿಕೆ ಮಾಡುವುದು ಮತ್ತು ತಮಗೆ ವಿರುದ್ಧವಾಗಿ ಅಭಿಪ್ರಾಯ ಹೊಂದುವವರನ್ನೆಲ್ಲ ಪಥಭ್ರಷ್ಟರೆಂದು ಸಾರುವುದು ಸಲಫಿಯ್ಯತ್ ಆಗಿದೆಯೇ?

Image

ಇಬ್ನ್ ಅಬ್ಬಾಸ್(ರ) ಮತ್ತು ಖವಾರಿಜ್ ಗಳ ಮಧ್ಯೆ ಜರುಗಿದ ಒಂದು ಮಹಾ ಸಂವಾದ - (ಕನ್ನಡ)

ಇಸ್ಲಾಮಿನಿಂದ ಹೊರಹೋದ ಖವಾರಿಜ್ ಗಳ ಗುಂಪು ಮತ್ತು ಪ್ರಸಿದ್ಧ ಸಹಾಬಿವರ್ಯರಾದ ಇಬ್ನ್ ಅಬ್ಬಾಸ್(ರ)ರವರ ಮಧ್ಯೆ ಜರುಗಿದ ಒಂದು ಮಹಾ ಸಂವಾದದ ವಿವರಣೆ.

Image

ಹಜ್ಜ್‘ನ ಶ್ರೇಷ್ಠತೆಗಳು, ಅದರ ನಿಬಂಧನೆಗಳು ಮತ್ತು ಅದರ ಕಡ್ಡಾಯತೆ - (ಕನ್ನಡ)

ಲೇಖನವು ಹಜ್ಜ್ ನ ಶ್ರೇಷ್ಠತೆಗಳು, ಅದರ ನಿಬಂಧನೆಗಳು ಮತ್ತು ಅದರ ಕಡ್ಡಾಯತೆಯನ್ನು ವಿವರಿಸುತ್ತದೆ.

Image

ನಮಾಝ್ ಕಸ್ರ್ ಮಾಡಬಹುದಾದ ಸಫರ್ - (ಕನ್ನಡ)

ಯಾತ್ರೆಯ ಸಂದರ್ಭದಲ್ಲಿ ಎಷ್ಟು ದೂರ ಪ್ರಯಾಣ ಮಾಡಿದರೆ ಕಸ್ರ್ ಮಾಡಬಹುದು ಎಂಬುದನ್ನು ಕುರ್ ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ಈ ಲೇಖನವು ವಿವರಿಸುತ್ತದೆ.

Image

ಭಿನ್ನಾಭಿಪ್ರಾಯದ ವಿಷಯಗಳಲ್ಲಿರುವ ಮಧ್ಯಮ ಮಾರ್ಗ - (ಕನ್ನಡ)

ಉಲಮಾಗಳು ಭಿನ್ನಾಭಿಪ್ರಾಯ ಹೊಂದಿರುವ ವಿಷಯಗಳಲ್ಲಿ ಮುಸ್ಲಿಮನೊಬ್ಬನ ನಿಲುವು ಏನಾಗಿರಬೇಕು ಎಂಬ ಮಧ್ಯಮ ಮಾರ್ಗವನ್ನು ಮತ್ತು ಸತ್ಯವನ್ನು ಅರಸುವ ತವಕದಲ್ಲಿ -ದೇಹೇಚ್ಛೆಯನ್ನು ಅನುಸರಿಸಿಯಲ್ಲ- ಇಜ್ತಿಹಾದ್ ಮಾಡಿ ಬಿದ್ ಅತ್ ನಲ್ಲಿ ಬಿದ್ದ ವ್ಯಕ್ತಿಯನ್ನು ನೂತನವಾದಿಯೆಂದು ಕರೆಯಬಾರದು ಎಂಬ ತತ್ವವನ್ನು ಈ ಲೇಖನವು ವಿವರಿಸುತ್ತದೆ.

Image

ಸಫರ್ ತಿಂಗಳು ಅಶುಭವಲ್ಲ - (ಕನ್ನಡ)

ಸಫರ್ ಎಂದರೇನು? ಅದಕ್ಕೆ ಈ ಹೆಸರು ಬರಲು ಕಾರಣವೇನು? ಸಫರ್ ತಿಂಗಳು ಅಶುಭವಾಗಿದೆಯೇ? ಹದೀಸ್ ಗಳು ಈ ಬಗ್ಗೆ ಏನೆನ್ನುತ್ತವೆ? ಸಫರ್ ತಿಂಗಳಲ್ಲಿ ವ್ಯಾಪಕವಾಗಿ ಆಚರಿಸಲಾಗುವ ಕೆಲವು ಬಿದ್ ಅತ್ ಗಳ ಬಗ್ಗೆ ಉಲಮಾಗಳು ಏನೆನ್ನುತ್ತಾರೆ? ಮೊದಲಾದ ವಿಷಯಗಳನ್ನು ಈ ಕೃತಿಯು ವಿವರಿಸುತ್ತದೆ. ಅದೇ ರೀತಿ ಪ್ರವಾದಿ(ಸ)ರವರ ಕಾಲದಲ್ಲಿ ಸಫರ್ ತಿಂಗಳಲ್ಲಿ ಜರುಗಿದ ಕೆಲವು ಘಟನೆಗಳನ್ನೂ ವಿವರಿಸುತ್ತದೆ.

Image

ರಮದಾನ್ ತಿಂಗಳ ಕೊನೆಯ ಹತ್ತು ದಿನಗಳು - (ಕನ್ನಡ)

ರಮದಾನ್ ತಿಂಗಳ ಕೊನೆಯ ಹತ್ತು ದಿನಗಳಲ್ಲಿ ಪ್ರವಾದಿ(ಸ)ರವರು ವಿಶೇಷವಾಗಿ ನಿರ್ವಹಿಸುತ್ತಿದ್ದ ಕೆಲವು ಕರ್ಮಗಳ ವಿವರಣೆ

Image

ಮುಸ್ಲಿಮ್ ತಂದೆಯ ಪರವಾಗಿ ಸದಕಾ ಮತ್ತು ಉಪವಾಸ - (ಕನ್ನಡ)

ತಂದೆ ಅಥವಾ ತಾಯಿ ತೌಹೀದ್ ನಲ್ಲಿದ್ದುಕೊಂಡು ಮರಣಹೊಂದಿದರೆ ಅವರ ಪರವಾಗಿ ಅವರ ಮಕ್ಕಳು ಮಾಡುವ ದಾನಧರ್ಮ ಮತ್ತು ಉಪವಾಸಗಳು ಅವರಿಗೆ ಪ್ರಯೋಜನ ನೀಡುತ್ತದೆ ಎಂಬುದರ ವಿವರಣೆ.