ಸೌದಿ ಅರೇಬಿಯಾದ ಹಿರಿಯ ವಿದ್ವಾಂಸ ಮಂಡಳಿಯ ಸದಸ್ಯರಾದ ಶೈಖ್ ಸಾಲಿಹ್ ಅಲ್ ಫೌಝಾನ್ ರವರು ರಚಿಸಿದ ಈ ಮಹತ್ವಪೂರ್ಣ ಕ್ರತಿಯು ನೈಜ ಇಸ್ಲಾಮೀ ವಿಶ್ವಾಸವನ್ನು ಮತ್ತು ಅದಕ್ಕೆ ತದ್ವಿರುದ್ಧವಾಗಿರುವ ಹಿರಿಯ ಮತ್ತು ಕಿರಿಯ ಶಿರ್ಕ್, ಬಿದ್ ಅತ್ ಇತ್ಯಾದಿಗಳ ಬಗ್ಗೆ ಸಮಗ್ರವಾದ ವಿವರಣೆಯನ್ನು ನೀಡುತ್ತದೆ.
ತೌಹೀದಿನ ನೈಜ ವಿಶ್ವಾಸ - (ಕನ್ನಡ)
ಏಕೈಕ ಸಂದೇಶ - (ಕನ್ನಡ)
ಈ ಪುಸ್ತಕವು ಕುರ್’ಆನ್ ಮತ್ತು ಬೈಬಲ್’ನಲ್ಲಿರುವ ಅಲ್ಲಾಹನ ಗುಣವಿಶೇಷಣಗಳನ್ನು ವಿವರಿಸುತ್ತದೆ. ಅದೇ ರೀತಿ ಆರಾಧನೆಗೆ ಅರ್ಹನಾಗಿರುವವನು ಅಲ್ಲಾಹು ಮಾತ್ರವೆಂದು ಕುರ್’ಆನ್ ಮತ್ತು ಬೈಬಲ್ ಒಪ್ಪಿಕೊಂಡಿರುವ ವಿಷಯವನ್ನೂ ವಿವರಿಸುತ್ತದೆ.
ಅಲ್ ಉಸೂಲು ಸ್ಸಲಾಸ (ಮೂರು ಮೂಲಭೂತ ನಿಯಮಗಳು) - (ಕನ್ನಡ)
ಇದು ಇಮಾಮ್ ಮುಹಮ್ಮದ್ ಇಬ್ನ್ ಅಬ್ದುಲ್ ವಹ್ಹಾಬ್ (ರಹಿಮಹುಲ್ಲಾಹ್) ರಚಿಸಿದ ಸಂಕ್ಷಿಪ್ತವಾದ ಮತ್ತು ಅಮೂಲ್ಯವಾದ ಕೃತಿಯಾಗಿದೆ. ಮನುಷ್ಯನು ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಇದು ಒಳಗೊಂಡಿದೆ. ಉದಾಹರಣೆಗೆ, ಅಲ್ಲಾಹನನ್ನು ಅರಿಯುವುದು, ಅವನು ಆದೇಶಿಸಿದ ವಿವಿಧ ಆರಾಧನೆಗಳ ಬಗ್ಗೆ ಅರಿಯುವುದು, ಇಸ್ಲಾಮ್ ಧರ್ಮವನ್ನು ಅರಿಯುವುದು, ಧರ್ಮದ ವಿವಿಧ ಹಂತಗಳನ್ನು ಮತ್ತು ಅವುಗಳ ಸ್ಥಂಭಗಳನ್ನು ಅರಿಯುವುದು, ಪ್ರವಾದಿ(ಸ)ರವರ ಬಗ್ಗೆ ಅರಿಯುವುದು, ಅವರ ಜೀವನದ ಬಗ್ಗೆ ಮತ್ತು ಅವರನ್ನು ಕಳುಹಿಸಿದ್ದಕ್ಕಿರುವ ಹಿಕ್ಮತ್ತನ್ನು ಅರಿಯುವುದು, ಪುನರುತ್ಥಾನದಲ್ಲಿರುವ ವಿಶ್ವಾಸ....
ಶುರೂತ್ ಲಾ ಇಲಾಹ ಇಲ್ಲಲ್ಲಾಹ್ - (ಕನ್ನಡ)
ಈ ಲೇಖನವು ಲಾ ಇಲಾಹ ಇಲ್ಲಲ್ಲಾಹ್ ಎಂಬ ಸಾಕ್ಷಿವಚನಕ್ಕಿರುವ ಏಳು ಷರತ್ತುಗಳನ್ನು ಸಂಕ್ಷಿಪ್ತವಾಗಿ ವಿವರಿಸುತ್ತದೆ.
ಯಾರು ಅಲ್ಲಾಹನನ್ನು ರಬ್ಬ್ ಆಗಿ, ಇಸ್ಲಾಮನ್ನು ದೀನ್ ಆಗಿ ಮತ್ತು ಮುಹಮ್ಮದ್(ಸ)ರವರನ್ನು ಪ್ರವಾದಿಯಾಗಿ ತೃಪ್ತಿಪಡುತ್ತಾನೋ ಅವನು ಈಮಾನಿನ ರುಚಿಯನ್ನು ಆಸ್ವಾದಿಸುತ್ತಾನೆ ಎಂಬುದರ ವಿವರಣೆ
ಅಲ್ಲಾಹೇತರರೊಂದಿಗೆ ಪ್ರಾರ್ಥಿಸುವುದು ಅತಿ ದೊಡ್ಡ ಶಿರ್ಕ್ ಆಗಿದೆಯೆಂದು ಈ ಲೇಖನ ಕುರ್’ಆನ್, ಸುನ್ನತ್ ಮತ್ತು ಉಲಮಾಗಳ ಹೇಳಿಕೆಗಳಿಂದ ವಿವರಿಸುತ್ತದೆ.
ಆಯತುಲ್ ಕುರ್ಸೀ ವ್ಯಾಖ್ಯಾನ - (ಕನ್ನಡ)
ಈ ಪುಸ್ತಕವು ಕುರ್ ಆನ್ ನ ಅತಿ ಮಹತ್ವಪೂರ್ಣ ಆಯತ್ ಆಗಿರುವ ಆಯತುಲ್ ಕುರ್ಸೀಯ ವ್ಯಾಖ್ಯಾನವನ್ನು ಮತ್ತು ಆ ಆಯತ್ತಿನಲ್ಲಿರುವ ಅಲ್ಲಾಹನ ನಾಮ ಮತ್ತು ವಿಶೇಷಣಗಳನ್ನು ವಿವರಿಸುತ್ತದೆ.
ಸಲಫೀ ಮನ್ ಹಜ್ - (ಕನ್ನಡ)
ಸಲಫೀ ಮನ್ ಹಜ್ ಹತ್ತು ತತ್ವಗಳ ಮೇಲೆ ಆಧಾರಿತವಾಗಿದೆ. ಆ ಹತ್ತು ತತ್ವಗಳನ್ನು ಶೈಖ್ ರವರು ಈ ಲೇಖನದಲ್ಲಿ ವಿವರಿಸುತ್ತಾರೆ.
ಭಯೋತ್ಪಾದನೆಯ ಬಗ್ಗೆ ಇಸ್ಲಾಮ್ ಏನೆನ್ನುತ್ತದೆ? - (ಕನ್ನಡ)
ಈ ಲೇಖನವು ಮನುಷ್ಯ ಜೀವದ ಪ್ರಾಮುಖ್ಯತೆ, ಇಸ್ಲಾಮಿನ ಯುದ್ಧ ನೀತಿ, ಜಿಹಾದಿನ ಬಗ್ಗೆಯಿರುವ ತಪ್ಪುಕಲ್ಪನೆಗಳು, ಸಹಿಷ್ಣುತೆಯ ಇಸ್ಲಾಮೀ ಚರಿತ್ರೆ, ಇಸ್ಲಾಮಿನಲ್ಲಿರುವ ವಿಶ್ವಭಾತ್ರತ್ವ ಮೊದಲಾದವುಗಳ ಬಗ್ಗೆ ವಿವರಿಸುತ್ತಾ ಮತ್ತು ಒಬ್ಬ ನಿರಪರಾಧಿಯನ್ನು ಅನ್ಯಾಯವಾಗಿ ಕೊಲ್ಲುವುದು ಸಂಪೂರ್ಣ ಮನುಕುಲವನ್ನು ಕೊಲ್ಲುವುದಕ್ಕೆ ಸಮಾನವಾಗಿದೆಯೆಂಬ ಇಸ್ಲಾಮೀ ತತ್ವವನ್ನು ಎತ್ತಿ ತೋರಿಸುತ್ತಾ ಇಸ್ಲಾಮಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧವಿಲ್ಲವೆಂದು ಆಧಾರ ಸಹಿತ ವಿವರಿಸುತ್ತದೆ.
ಅಲ್ಲಾಹು - (ಕನ್ನಡ)
ಮನುಷ್ಯನು ತನ್ನ ಸೃಷ್ಟಿಕರ್ತನ ಬಗ್ಗೆ ಕಡ್ಡಾಯವಾಗಿ ಅರಿತಿರಬೇಕಾದ ವಿಷಯಗಳನ್ನು ಈ ಕೃತಿಯು ಒಳಗೊಂಡಿದೆ. ಮುಖ್ಯವಾಗಿ ಅಲ್ಲಾಹು ಎಂದರೆ ಯಾರು? ಅವನ ವೈಶಿಷ್ಟ್ಯಗಳೇನು? ಅವನನ್ನು ಅರಿಯಬೇಕಾದುದು ಹೇಗೆ? ಮೊದಲಾದ ಪ್ರಮುಖ ಪ್ರಶ್ನೆಗಳಿಗೆ ಈ ಕೃತಿಯು ಉತ್ತರಿಸುತ್ತದೆ. ಅದೇ ರೀತಿ ಈ ಕೃತಿಯು ನಾಸ್ತಿಕರ, ಅವತಾರವಾದಿಗಳ, ಬಹುದೇವವಿಶ್ವಾಸಿಗಳ ಮತ್ತು ಗ್ರಂಥದವರಾದ ಯಹೂದ ಕ್ರೈಸ್ತರ ವಾದಗಳಿಗೆ ಉತ್ತರ ನೀಡುತ್ತದೆ. ಅಲ್ಲಾಹನ ಬಗ್ಗೆ ಅರಿತುಕೊಳ್ಳಲು ಈ ಕೃತಿಯು ಮುಸ್ಲಿಮರಿಗೂ ಮುಸ್ಲಿಮೇತರರಿಗೂ ಒಂದು ಉತ್ತಮ ಕೈಪಿಡಿಯಾಗಿದೆ.
ಖುರ್ಆನ್ ಎಂದರೇನು? - (ಕನ್ನಡ)
ಈ ಕಿರುಪತ್ರದಲ್ಲಿ ಲೇಖಕರು ಖುರ್ಆಿನ್ ಅದ್ಭುತಗಳ ಅದ್ಭುತ ಎಂಬುದಾಗಿ ವಿವರಿಸಿದ್ದಾರೆ. ಜೊತೆಗೆ ಖುರ್ಆ ನ್ನ�ಲ್ಲಿರುವ ಕೆಲವು ವೈಜ್ಞಾನಿಕ ಶಾಖೆಗಳನ್ನು ವಿವರಿಸಿದ್ದಾರೆ.
ಲೇಖಕರು ಹೇಳುತ್ತಾರೆ: ಇದು ಕುಟುಂಬ ಸಂಬಂಧ ಜೋಡಣೆ ಎಂಬ ವಿಷಯದ ಬಗ್ಗೆ ಬರೆದ ಒಂದು ಸಂಕ್ಷಿಪ್ತ ಕೃತಿ. ಇದರಲ್ಲಿ ನಾನು ಕುಟುಂಬ ಸಂಬಂಧ ಜೋಡಣೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ಮತ್ತು ಕುಟುಂಬ ಸಂಬಂಧ ವಿಚ್ಛೇದನೆಯ ಭಾಷಿಕ ಮತ್ತು ಪಾರಿಭಾಷಿಕ ಅರ್ಥವನ್ನು ವಿವರಿಸಿದ್ದೇನೆ. ನಂತರ ಕುಟುಂಬ ಸಂಬಂಧ ಜೋಡಿಸುವುದು ಕಡ್ಡಾಯವಾಗಿದೆ ಹಾಗೂ ಕುಟುಂಬ ಸಂಬಂಧ ವಿಚ್ಛೇದಿಸುವುದು ನಿಷಿದ್ಧವಾಗಿದೆ ಎಂಬ ವಿಷಯಕ್ಕೆ ಕುರ್’ಆನ್ ಮತ್ತು ಸುನ್ನತ್ತಿನಲ್ಲಿರುವ ಪುರಾವೆಗಳನ್ನು ಉಲ್ಲೇಖಿಸಿದ್ದೇನೆ.