ಜೀವನ ಮಾಧುರ್ಯ
ನಿಸ್ಸಂಶಯವಾಗಿಯೂ ಜೀವನದಲ್ಲಿ ಸೌಭಾಗ್ಯವನ್ನು ಅಥವಾ ಜೀವನ ಮಾಧುರ್ಯವನ್ನು ಅರಸುವುದು ಮಾನವನು ಬಯಸುವಂಥಹ ಜೀವನ ಲಕ್ಷ್ಯವಾಗಿದೆ. ಅವನು ತನ್ನ ದೈನಂದಿನ ಚಟುವಟಿಕೆಗಳ ಮೂಲಕ ಜೀವನ ಮಾಧುರ್ಯ, ಶಾಂತತೆ ಹಾಗೂ ನೆಮ್ಮದಿಯನ್ನು ಹುಡುಕುವ ಪ್ರಯತ್ನವನ್ನು ಮಾಡುತ್ತಿದ್ದಾನೆ. ವಸ್ತುತ ಜೀವನ ಸೌಭಾಗ್ಯ ದ ಕುರಿತಾದ ಜನರ ನಿಲುವುಗಳು ಒಂದೇ ತೆರನಾದವುಗಳಲ್ಲ. ಹೆಚ್ಚಿನ ಜನರು ಅದನ್ನು ಪಡೆಯುವುದರಲ್ಲಿ ಅವುಗಳ ಮಾರ್ಗಗಳಿಗೆ ತಲುಪುವುದರಲ್ಲಿ ಎಡವುತ್ತಾರೆ ಹಾಗೂ ಅವುಗಳ ಬಗ್ಗೆ ಅಜ್ಞಾನಿಗಳಾಗಿರುತ್ತಾರೆ. ನಿಜವಾಗಿ ಹೇಳುವುದಾದರೆ ಅವುಗಳನ್ನು ಪಡೆಯಲು ಹಾಗೂ ಸಾಕ್ಷಾತ್ಕಾರ ಮಾಡಿಕೊಳ್ಳಲು ಇರುವ ಮಾರ್ಗಗಳೆಂದರೆ ಅಲ್ಲಾಹುವಿನ ಮೇಲಿನ ವಿಶ್ವಾಸ ಹಾಗೂ ಸತ್ಕರ್ಮಗಳಾಗಿವೆ. ಈ ಕಿರು ಪುಸ್ತಕದಲ್ಲಿ ಲೇಖಕರು ಜೀವನ ಮಾಧುರ್ಯದೆಡೆಗೆ ಇರುವ ಪ್ರಮುಖ ಮಾರ್ಗಗಳನ್ನು ಪ್ರಸ್ತಾಪಿಸುತ್ತಾರೆ.