ಝಾದ್ ಗ್ರೂಪ್’ನವರ ದೃಶ್ಯ ಸರಣಿ - ಸುನ್ನತ್ತಿನ ಆಧಾರದಲ್ಲಿ ನಮ್ಮ ಬದುಕು
ಹಜ್ಜ್ ಮತ್ತು ಉಮ್ರಾದ ವಿವರಣೆ - (ಕನ್ನಡ)
ಈ ಕೃತಿಯು ಹಜ್ಜ್ ಮತ್ತು ಉಮ್ರಾವನ್ನು ಮತ್ತು ಹಜ್ಜ್ ನ ವಿಧಗಳನ್ನು ಕುರ್ ಆನ್ ಮತ್ತು ಸುನ್ನತ್ತಿನ ಆಧಾರದಲ್ಲಿ ವಿವರಿಸುತ್ತದೆ.
ಸ್ವರ್ಗದಲ್ಲಿ ಮಹಿಳೆಯರ ಸ್ಥಿತಿ - (ಕನ್ನಡ)
ಸ್ವರ್ಗವನ್ನು ಪ್ರವೇಶಿಸಿದ ಮಹಿಳೆಯರ ಸ್ಥಿತಿ ಹೇಗಿರುತ್ತದೆಯೆಂಬ ಜನರು, ವಿಶೇಷವಾಗಿ ಮಹಿಳೆಯರು ಹೆಚ್ಚು ಹೆಚ್ಚಾಗಿ ಪ್ರಶ್ನಿಸುವ ಪ್ರಶ್ನೆಗಳಿಗೆ ಲೇಖಕರು ಕುರ್ ಆನ್, ಸುನ್ನತ್ ಮತ್ತು ಉಲಮಾಗಳ ಮಾತುಗಳಿಂದ ಸರಳವಾದ ಶೈಲಿಯಲ್ಲಿ ಉತ್ತರವನ್ನು ನೀಡುತ್ತಾರೆ.
ಪ್ರವಾದಿಚರ್ಯೆಯ ಬಗ್ಗೆ ಅಕ್ಲಾನಿಗಳ ನಿಲುವು - (ಕನ್ನಡ)
ಪ್ರವಾದಿ ಮುಹಮ್ಮದ್(ಸ)ರವರ ಸುನ್ನತ್ತಿನ ಬಗ್ಗೆ ಅಕ್ಲಾನಿಗಳ ನಿಲುವನ್ನು ಈ ಲೇಖನವು ಬಹಿರಂಗಪಡಿಸುತ್ತದೆ.
ವಿಧಿಯನ್ನು ಹಳಿಯ ಬೇಡಿ - (ಕನ್ನಡ)
ಲೇಖಕರು ಈ ಕೃತಿಯಲ್ಲಿ ವಿಧಿಯ ವಾಸ್ತವಿಕತೆಯ ಬಗ್ಗೆ ವಿವರಿಸುತ್ತಾ ವಿಧಿಯನ್ನು ಹಳಿಯುವುದು ಅಲ್ಲಾಹನನ್ನು ಹಳಿಯುದಕ್ಕೆ ಸಮ ಎನ್ನುತ್ತಾರೆ. ಕಾರಣ ವಿಧಿಯನ್ನು ನಿರ್ಣಯಿಸುವವನು ಅಲ್ಲಾಹು. ಈ ಜಗತ್ತಿನಲ್ಲಿ ಅವನ ಇಚ್ಛೆ ಮತ್ತು ಅರಿವಿನ ವಿನಾಃ ಏನೂ ಸಂಭವಿಸುವುದಿಲ್ಲ. ಒಳಿತು ಮತ್ತು ಕೆಡುಕು ಎಲ್ಲವೂ ಅಲ್ಲಾಹನ ನಿರ್ಣಯ ಪ್ರಕಾರವೇ ಉಂಟಾಗುತ್ತದೆ. ಪ್ರತಿಯೊಂದರಲ್ಲೂ ಅವನಿಗೆ ಯುಕ್ತಿಯಿದೆ. ಆ ಯುಕ್ತಿಯೇನೆಂದು ತಿಳಿಯಲು ಕೆಲವೊಮ್ಮೆ ನಮಗೆ ಸಾಧ್ಯವಾಗಲಾರದು. ಆದುದರಿಂದಲೇ ವಿಧಿಯನ್ನು ಹಳಿಯುವುದನ್ನು ಇಸ್ಲಾಂ ವಿರೋಧಿಸುತ್ತದೆ.
ಈ ಕಿರುಕೃತಿಯು ಮುಹರ್ರಮ್ ತಿಂಗಳ ಬಗ್ಗೆಯಿರುವ ಹದೀಸ್ ಗಳನ್ನು ಮತ್ತು ಅವುಗಳ ವಿವರಣೆಯನ್ನು ಒಳಗೊಂಡಿದೆ
ಈ ಲೇಖನವು ಮಕ್ಕಾ ಹರಮ್ ನ ಶ್ರೇಷ್ಠತೆಗಳನ್ನು ಮತ್ತು ಅದರಲ್ಲಿರುವ ದುಪ್ಪಟ್ಟು ಪ್ರತಿಫಲಗಳನ್ನು ವಿವರಿಸುತ್ತದೆ.
ಇಸ್ರಾಅ ಮತ್ತು ಮಿಅರಾಜ್ ಆಚರಿಸುವುದರ ವಿಧಿ - (ಕನ್ನಡ)
ಇಸ್ರಾಅ ಮತ್ತು ಮಿಅರಾಜಿನ ರಾತ್ರಿಯನ್ನು ಆಚರಿಸುವುದು ಬಿದ್’ಅತ್ ಆಗಿದೆ. ಲೇಖಕರು ಹೇಳುತ್ತಾರೆ: ಇಸ್ರಾಅ ಮತ್ತು ಮಿಅರಾಜ್ ಸಂಭವಿಸಿದ ರಾತ್ರಿಯನ್ನು ಆಚರಿಸುವುದು ಧರ್ಮದಲ್ಲಿ ಒಳಪಟ್ಟಿರುತ್ತಿದ್ದರೆ ಮೊಟ್ಟಮೊದಲು ಸಹಾಬಾಗಳು ಅದನ್ನು ಆಚರಿಸುತ್ತಿದ್ದರು. ಆದರೆ ಅವರಾರೂ ಅದನ್ನು ಆಚರಿಸಿಲ್ಲ. ಆದುದರಿಂದ ಅದು ಧರ್ಮದಲ್ಲಿ ಸೇರಿದ್ದಲ್ಲ ಎನ್ನುವುದು ಸ್ಪಷ್ಟ. ಆ ರಾತ್ರಿಯನ್ನು ಗೌರವಿಸುವುದು ಇಸ್ಲಾಮಿನಲ್ಲಿ ಒಳಪಟ್ಟದ್ದಲ್ಲ.
ಕಿಯಾಮು ರಮದಾನ್ ಮತ್ತು ಇಅತಿಕಾಫ್ - (ಕನ್ನಡ)
ಕಿಯಾಮು ರಮದಾನ್ ನ ಶ್ರೇಷ್ಠತೆಗಳು, ಅದನ್ನು ನಿರ್ವಹಿಸಬೇಕಾದ ವಿಧಾನ, ಅದನ್ನು ಜಮಾಅತ್ ಆಗಿ ನಿರ್ವಹಿಸುವುದನ್ನು ಶರೀಅತ್ ಅದೇಶಿಸಿದೆ ಮತ್ತು ಇಅತಿಕಾಫ್ ನ ವಿಷಯದಲ್ಲಿರುವ ಅಮೂಲ್ಯ ಸಂಶೋಧನೆಯನ್ನು ಈ ಕೃತಿಯು ಒಳಗೊಂಡಿದೆ.
ವಿಸ್ಮಯಗೊಳಿಸುವ ಕುರ್ ಆನ್ - (ಕನ್ನಡ)
ಡಾ| ಗ್ಯಾರಿ ಮಿಲ್ಲರ್ ಒಬ್ಬ ತಿಯೋಲಜಿಸ್ಟ್ (ದೇವಾಧ್ಯಯನ ಮಾಡುವವನು) ಮತ್ತು ಗಣಿತ ಶಾಸ್ತ್ರಜ್ಞರಾಗಿದ್ದರು. ಕುರ್ ಆನಿನಲ್ಲಿ ಒಂದು ತಪ್ಪನ್ನಾದರೂ ಹುಡುಕಬೇಕು ಎಂಬ ದೃಢ ನಿರ್ಧಾರ ಕೈಗೊಂಡು ಇವರು ಕುರ್ ಆನ್ ಅಧ್ಯಯನ ಮಾಡಲು ಆರಂಭಿಸಿದರು. ಆದರೆ ಕುರ್ ಆನಿನ ಅಧ್ಯಯನ ಮಾಡತೊಡಗಿದಂತೆ ಅವರಿಗೆ ಅದು ವಿಸ್ಮಯಕರವಾಗಿ ಕಂಡಿತು. ತರುವಾಯ ಅವರು ಇಸ್ಲಾಮನ್ನು ಸ್ವೀಕರಿಸಿ ಮುಸ್ಲಿಮರಾದರು. ಕುರ್ ಆನನ್ನು ಒಂದು ವೈಜ್ಞಾನಿಕ ದೃಷ್ಟಿಕೋನದಿಂದ ಸಮೀಪಿಸಿದ ತನ್ನ ಅನುಭವಗಳನ್ನು ಅವರು ಇದರಲ್ಲಿ ವಿವರಿಸಿದ್ದಾರೆ.
ಫೋನ್ ಸಂಭಾಷಣೆಯ ಶಿಷ್ಟಾಚಾರಗಳು - (ಕನ್ನಡ)
ಫೋನ್ ಮತ್ತು ಮೊಬೈಲ್ ಬಳಕೆಯು ಇಂದು ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿದೆ. ಆದರೆ ಫೋನಿನಲ್ಲಿ ಸಂಭಾಷಣೆ ಮಾಡುವಾಗ ನಾವು ಪಾಲಿಸಬೇಕಾದ ಕೆಲವು ಶಿಷ್ಟಾಚಾರಗಳನ್ನು ಈ ಕೃತಿಯು ವಿವರಿಸುತ್ತದೆ. ಫೋನಿನ ಸದುಪಯೋಗವಾಗುವುದಕ್ಕಾಗಿ ಮತ್ತು ಫೋನಿನಿಂದಾಗಿ ಅಲ್ಲಾಹನ ಕ್ರೋಧಕ್ಕೆ ಒಳಗಾಗದಿರುವುದಕ್ಕಾಗಿ ಈ ಶಿಷ್ಟಾಚಾರಗಳನ್ನು ನಾವು ಪಾಲಿಸಬೇಕಾಗಿದೆ.
ಇಸ್ತಿಗ್ಫಾರ್ ಮಾಡುವ ಅತಿಶ್ರೇಷ್ಠ ವಿಧಾನ - (ಕನ್ನಡ)
ಇಸ್ತಿಗ್ಫಾರ್ ಮಾಡುವ ಅತಿಶ್ರೇಷ್ಠ ವಿಧಾನವನ್ನು ವಿವರಿಸುವ ಹದೀಸಿನ ವ್ಯಾಖ್ಯಾನ ಮತ್ತು ಇಸ್ತಿಗ್ಫಾರ್’ನ ಶ್ರೇಷ್ಠತೆಗಳನ್ನು ಈ ಪುಸ್ತಕವು ಒಳಗೊಂಡಿದೆ.

API


